ಶುಕ್ರವಾರ, ನವೆಂಬರ್ 27, 2015

ವಿನೂತನ ಚಿತ್ರಸಂತೆ ಆಳ್ವಾಸ್ ಕಲಾಮೇಳ

ನುಡಿಸಿರಿಯ ಜನಮನಗೆದ್ದ ರಾಜ್ಯಮಟ್ಟದ ಕಲಾಮೇಳ

-ಅಪರ ಉಜಿರೆ

ಪ್ರತಿ ವರ್ಷವೂ ನುಡಿಸಿರಿಯು ಒಚಿದಲ್ಲಾ ಒಚಿದು ಕಾರಣಕ್ಕೆ ತನ್ನ ವಿಶೇಷತೆಯನ್ನು ಮೆರೆಯುತ್ತಾ ಬಂದಿದೆ. ಎಲ್ಲಾ ನುಡಿಸಿರಿಗಳಲ್ಲೂ ನಾಡಿನ ವಿವಿಧ ಭಾಗಗಳಿಂದ ಚಿತ್ರ ಕಲಾವಿದರನ್ನು ಕರೆಸಿ ಅವರಿಂದ ವಿವಿಧ ಕಲಾಕೃತಿಗಳನ್ನು ಹೊರತರುವ ಕಾರ್ಯ ಎಲ್ಲರಿಗೂ ತಿಳಿದ ವಿಚಾರ. ಆದರೆ ಈ ಬಾರಿ 12ನೇ ಆಳ್ವಾಸ್ ನುಡಿಸಿರಿಯಲ್ಲಿ ಕೊಂಚ ವಿಶೇಷವೆಂಬಂತೆ ಡಾ. ಆಳ್ವರು ನಾಡಿನ ಕಲಾವಿದರು ರಚಿಸಿರುವ ಕಲಾಕೃತಿಗಳನ್ನು ಪ್ರದರ್ಶನ ಮತ್ತು ಮಾರಾಟದ ಕಲಾವಿದರಿಗೆ ಅನುಕೂಲವಾಗುವಂತೆ ರಾಜ್ಯಮಟ್ಟದ ಆಳ್ವಾಸ್ ಕಲಾಮೇಳವನ್ನು ಆಯೋಜಿಸಿದ್ದಾರೆ.
ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿರುವ ಆಳ್ವಾಸ್ ಪದವಿ ಕಾಲೇಜಿನ ಆವರಣದಲ್ಲಿ ರಾರಾಜಿಸುತ್ತಿರುವ ಕಲಾವೇಳದಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಸ್ವರೂಪ ಅಧ್ಯಯನ ಕೇಂದ್ರ, ಮಂಗಳೂರು, ಕರಾವಳಿ ಕಲಾವಿದರ ಚಾವಡಿ, ಚಿತ್ರಕಲಾ ಮಂದಿರ ಉಡುಪಿ ಮತ್ತು ವಿಜಯಾ ದೃಶ್ಯಕಲಾ ಮಹಾವಿದ್ಯಾಲಯ ಮೊದಲಾದ ಸಂಸ್ಥೆಗಳನ್ನು ಒಳಗೊಂಡಂತೆ 64 ಜನ ಕಲಾವಿದರು ಈ ಮೇಳದಲ್ಲಿ ಪಾಲ್ಗೊಂಡಿದ್ದಾರೆ.
ಯಾವುದೇ ಮಧ್ಯವರ್ತಿಗಳ ತೊಂದರೆಯಿಲ್ಲದೆ ನೇರವಾಗಿ ಗ್ರಾಹಕ ಮತ್ತು ಕಲಾವಿದರ ನಡುವೆ


ಸಂಪರ್ಕವನ್ನು ಸಾಧಿಸುವ ಮೂಲಕ ಕಲಾವಿದರ ಕಲಾಕೃತಿಗಳಿಗೆ ಅರ್ಥಪೂರ್ಣ ಬೆಲೆ ಸಿಗುವಂತೆ ಮಾಡಲಾಗಿದೆ. ‘ವರ್ಷವರ್ಷವೂ ಬೆಂಗಳೂರಿನಲ್ಲಿ ನಡೆಯುವ ಚಿತ್ರಸಚಿತೆಯ ಮಾದರಿಯನ್ನಿಟ್ಟುಕೊಂಡು ಈ ಕಲಾಮೇಳವನ್ನು ಆಯೋಜಿಸಿದ್ದೇವೆ. ಕಲಾವಿದರಿಗೆ ಇಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ತಮ್ಮ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಉಚಿತ ಅವಕಾಶವನ್ನು ಮಾಡಿಕೊಡಲಾಗಿದೆ. ಇಲ್ಲಿ ಸುಮಾರು ಎಂಟು ಮಂದಿ ಸ್ಥಳದಲ್ಲಿಯೇ ವ್ಯಕ್ತಿಚಿತ್ರಗಳನ್ನು ರಚಿಸುವ ಕಲಾವಿದರಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.’ ಎನ್ನುತ್ತಾರೆ. ಕಲಾಮೇಳದ ಉಸ್ತುವಾರಿಯನ್ನು ವಹಿಸಿಕೊಂಡಿರುವ ಆಳ್ವಾಸ್ ವಿದ್ಯಾಸಂಸ್ಥೆಯ ಶಿಕ್ಷಕ ಶ್ರೀ ಭಾಸ್ಕರ್ ನೆಲ್ಯಾಡಿಯವರು.
‘ನಾನು ದೂರದ ಹಂಪಿಯಿಂದ ಬಂದಿದ್ದು,  ಚಿತ್ರಕಲಾವಿದರನ್ನು ಇಷ್ಟು ಗೌರವದಿಂದ ಕಾಣುವ ಹಾಗೂ ಈ ತರ ಎಲ್ಲಾ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟಿರುವುದನ್ನು ಈ ಹಿಂದೆ ಎಲ್ಲಿಯೂ ನೋಡಿಲ್ಲ. ರಾಷ್ಟ್ರಮಟ್ಟದ ಈ ಉತ್ಸವದಲ್ಲಿ ಪಾಲ್ಗೊಳ್ಳಲು ನನಗೆ ತುಂಬಾ ಹೆಮ್ಮೆ ಮತ್ತು ಖುಷಿಯಾಗುತ್ತಿದೆ. ವಿದ್ಯಾರ್ಥಿ ಜೀವನದಲ್ಲಿಯೇ ನನಗೆ ಈ ಅವಕಾಶ ದೊರೆತಿದೆ ಅಂದರೆ ನ ಇಜಕ್ಕೂ ನಾನು ಧನ್ಯ ಎಂದೆನಿಸುತ್ತದೆ’ ಎಂಬುದಾಗಿ ಸಚಿತಸದಿಂದ ಅಮತರಾಳದ ಮಾತುಗಳನ್ನು ಬಿಚ್ಚಿಡುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿದ್ಯಾರ್ಥಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ